ಪಾಟ್ನಾ, ನ.07 (DaijiworldNews/PY): ಬಿಹಾರ ಚುನಾವಣೆಯಲ್ಲಿ ಈ ಬಾರಿ ಯುಪಿಎ ಮಹಾಮೈತ್ರಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ತಿಳಿಸಿವೆ.
ಸಮೀಕ್ಷೆಯೊಂದರ ಪ್ರಕಾರ, ಮಹಾಮೈತ್ರಿಗೆ 120, ಎನ್ಡಿಎಗೆ 116, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿಗೆ 1 ಹಾಗೂ ಇತರ ಪಕ್ಷಗಳು ಆರು ಸ್ಥಾನ ಗೆಲ್ಲಲಿದ್ದಾರೆ ಎಂದು ತಿಳಿಸಿದೆ.
ಮತ್ತೊಂದು ಸಮೀಕ್ಷೆಯ ಪ್ರಕಾರ, ಯುಪಿಎ 118-138 ಸ್ಥಾನ, ಎನ್ಡಿಎಗೆ 91-117 ಸ್ಥಾನ ಎಂದು ತಿಳಿಸಿದೆ.
ಇನ್ನೊಂದು ಸಮೀಕ್ಷೆಯ ಪ್ರಕಾರ, ಆರ್ಜೆಡಿ ನೇತೃತ್ವದ ಮಹಾಘಟಬಂಧನಕ್ಕೆ 108 -131 ಸ್ಥಾನ, ಜೆಡಿಯು ನೇತೃತ್ವದ ಎನ್ಡಿಎಗೆ 104 - 128 ಸ್ಥಾನ, ಇತರರಿಗೆ 4-8 ಸ್ಥಾನ ಪಡೆಯಲಿದೆ ಎಂದು ತಿಳಿಸಿದೆ.