ಚಿಕ್ಕಮಗಳೂರು, ನ. 07 (DaijiworldNews/HR): ರಾಜ್ಯದ್ಯಾಂತ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಕಾನೂನನ್ನು ಜಾರಿಗೆ ತಂದೇ ತರುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾನೂನು ಬಗ್ಗೆ ಮಾಜಿ ಸಚಿವ ಯು.ಟಿ ಖಾದರ್ ಅವರದ್ದೆ ಸರ್ಕಾರ ಇದೆ, ಮಂತಾತರ ಕಾನೂನು ಜಾರಿಗೆ ತರಲಿ ಎಂದು ಹೇಳಿದ್ದು, ಆದರೆ ಇದರ ಬಗ್ಗೆ ಅವರ ಬಳಿ ಹೇಳಿಸಿಕೊಂಡು ಕಾನೂನು ಜಾರಿಗೆ ತರುವ ಅವಶ್ಯಕತೆಯಿಲ್ಲ. ಕಾನೂನು ಜಾರಿಗೊಳಿಸುವ ಬಗ್ಗೆ ಈಗಾಗಲೇ ಎಲ್ಲಾ ಹಂತದಲ್ಲಿ ಚರ್ಚೆಯಾಗಿದೆ. ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸುತ್ತೇವೆ ಎಂದರು.
ಇನ್ನು ವಿದ್ಯುತ್ ದರ ಹೆಚ್ಚಳದ ಬಗ್ಗೆ ಮಾತನಾಡಿದ ಸಚಿವರು, ಸರ್ಕಾರಕ್ಕೂ ಆರ್ಥಿಕ ಇತಿಮಿತಿ ಅನ್ನುವಂತಹದು, ನಮ್ಮ ಸರ್ಕಾರ ಎಂದಾಕ್ಷಣ ಅಕ್ಷಯ ಪಾತ್ರೆ ಅಲ್ಲ ಹಾಗಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಜನ ಸಹಕರಿಸಬೇಕು ಎಂದು ಹೇಳಿದ್ದಾರೆ.
ಈ ವರ್ಷ ನಮ್ಮ ಸರ್ಕಾರಕ್ಕೆ ಅನೇಕ ಕಷ್ಟದ ಸವಾಲುಗಳಿವೆ.ಕೊರೊನಾದಿಂದ ಆರ್ಥಿಕ ದುಸ್ಥಿತಿ ಬಂದಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ಅತಿವೃಷ್ಠಿಯಾಗಿ ಸಾವಿರಾರು ಕೋಟಿ ನಷ್ಟವಾಗಿದೆ. 8 ತಿಂಗಳಿಂದ 6 ಕೋಟಿ ಜನರಿಗೆ ವಿವಿಧ ಬಗೆಯಲ್ಲಿ ಸರ್ಕಾರ ಕೊರೊನಾ ನಿರ್ವಹಣೆ ಮಾಡಿದೆ ಎಂದರು.