ಬೆಂಗಳೂರು, ನ. 07 (DaijiworldNews/MB) : ಭಾರತದ ಮೊಟ್ಟಮೊದಲ ಸ್ವಚ್ಚವಾಯು ಸ್ಟ್ರೀಟ್ ಟೆಸ್ಟ್ ಬೆಡ್ ಅನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಶನಿವಾರ ಉದ್ಘಾಟನೆ ಮಾಡಿದರು.
ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದ್ದು, ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು 'ಚರ್ಚ್ ಸ್ಟ್ರೀಟ್ ಫಸ್ಟ್' - ಭಾರತದ ಮೊಟ್ಟಮೊದಲ ಸ್ವಚ್ಚವಾಯು ಸ್ಟ್ರೀಟ್ ಟೆಸ್ಟ್ ಬೆಡ್ ಅನ್ನು ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಇಂದು ಉದ್ಘಾಟಿಸಿದರು'' ಎಂದು ತಿಳಿಸಿದೆ.
ಹಾಗೆಯೇ ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಶಾಸಕ ಎನ್.ಎ. ಹಾರಿಸ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.