ನವದೆಹಲಿ,ನ. 07 (DaijiworldNews/HR): ಹರ್ಯಾಣದ ಪಂಚಕುಲದಲ್ಲಿ ಮುಂದಿನ ವರ್ಷ ನಡೆಯಲಿರುವ ಖೇಲೋ ಇಂಡಿಯಾದಲ್ಲಿ ಆಟವಾಡಲು ಅವಕಾಶ ನೀಡುವುದಾಗಿ ದೇಶಾದ್ಯಂತ ಅನೇಕ ಅಥ್ಲೀಟ್ಗಳನ್ನು ವಂಚಿಸಿದ್ದ ಆರೋಪದಲ್ಲಿ ಉತ್ತರಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಭಾರತ ಕ್ರೀಡಾ ಪ್ರಾಧಿಕಾರ ನೀಡಿದ್ದ ದೂರನ್ನು ಆಧರಿಸಿ ಒಬ್ಬ ಮಾಜಿ ಕಬಡ್ಡಿ ಪಟು ಸೇರಿ ಒಟ್ಟು ಮೂವರನ್ನು ಬಂಧಿಸಲಾಗಿದೆ.
ವಂಚರರು ಸಾಮಾಜಿಕ ತಾಣಗಳಲ್ಲಿ ಒಂದು ಪುಟವನ್ನು ತೆರೆದು ಅದರಲ್ಲಿ ಕೂಟದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಿದ್ದರು. ಅದಕ್ಕಾಗಿ ತಲಾ 6,000 ರೂ. ಪಾವತಿಸಬೇಕೆಂದು ತಿಳಿಸಿದ್ದರು.
ಆರೋಪಿಗಳನ್ನು ಸಂಜಯ್ ಪ್ರತಾಪ್ ಸಿಂಗ್, ಅನುಜ್ಕುಮಾರ್, ಮತ್ತು ರವಿ ಎಂದು ಗುರ್ತಿಸಲಾಗಿದೆ.