ಕೋಲ್ಕತ್ತ, ನ. 07 (DaijiworldNews/HR): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಸಂಭವಿಸಿದ ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದ್ದಾರೆ.
ಈ ಕುರಿತು ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಮಿತ್ ಶಾ ಮಾತನಾಡಿ, ಪಶ್ಚಿಮ ಬಂಗಾಳವು 2018ರಿಂದ ಅಪರಾಧದ ಅಂಕಿ ಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊಗೆ ಕಳುಹಿಸಿಲ್ಲ ಹಾಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಇಂತಹ ಹತ್ಯೆಗಳು ಪಶ್ಚಿಮ ಬಂಗಾಳದಲ್ಲೇ ಅತಿ ಹೆಚ್ಚು ನಡೆಯುತ್ತಿದೆ ಎಂದರು.
ಇನ್ನು ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಅಧಿಕಾರಿಗಳೂ ಕೂಡ ರಾಜಕೀಯ ಕೈಗೊಂಬೆಗಳಾಗಿದ್ದಾರೆ ಹಾಗೂ ಅಪರಾಧಿಗಳಾಗಿದ್ದಾರೆ. ಇಲ್ಲಿ ಮೂರು ಕಾನೂನುಗಳಿದ್ದು, ಒಂದು ಕುಟುಂಬದ ಸದಸ್ಯರಿಗೆ ಮತ್ತೊಂದು ಅಲ್ಪಸಂಖ್ಯಾತರರನ್ನು ಒಲಿಸಿಕೊಳ್ಳಲು ಹಾಗೂ ಕೊನೆಯದಾಗಿ ಸಾಮಾನ್ಯ ಜನರಿಗೆ ಎಂದು ಆರೋಪಿಸಿದ್ದಾರೆ.