ಹೊಸದಿಲ್ಲಿ,ನ. 06 (DaijiworldNews/HR): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(ಎಸ್ಸಿ, ಎಸ್ಟಿ ) ಕಾಯ್ದೆ ಅಡಿ ಸೇರಿರುವ ವ್ಯಕ್ತಿಗಳಿಗೆ ಮಾಡುವ ಎಲ್ಲ ಅವಮಾನಗಳು ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.
ಎಸ್ಸಿ, ಎಸ್ಟಿ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಅವರಿಗೆ ಮಾಡುವ ಅವಮಾನಗಳು ಅಥವಾ ಬೆದರಿಕೆಗಳನ್ನು ಒಡ್ಡಿದರೆ ಮಾತ್ರ ಕಾನೂನಿನಡಿಯಲ್ಲಿ ಅದು ಅಪರಾಧವಾಗುತ್ತದೆ ಹೊರತು ಎಲ್ಲ ಅವಮಾನಗಳು ಅಪರಾಧವಾಗುವುದಿಲ್ಲ ಎಂದು ತಿಳಿಸಿದೆ.
ಇನ್ನು ತನ್ನ ಮನೆಯಲ್ಲಿ ದಲಿತ ಮಹಿಳೆಯನ್ನು ನಿಂದಿಸಿದ ಕಾರಣಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಯ್ದೆ ಅಡಿ ಪ್ರಕರಣ ಎದುರಿಸುತ್ತಿರುವ ಹಿತೇಶ್ ವರ್ಮಾ ಎಂಬುವವರು ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.