ಮೈಸೂರು, ನ.06 (DaijiworldNews/PY): ಸ್ವಾತಂತ್ರ್ಯ ಉದ್ಯಾನವನದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
File Photo
ಗಾಂಧಿ ಪ್ರತಿಮೆಯಲ್ಲಿದ್ದ ಕಂಚಿನ ಊರುಗೋಲನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದು, ಘಟನೆಯ ಬಗ್ಗೆ ನಾಗರಿಕರು ಆಕ್ರೋಶಗೊಂಡಿದ್ದಾರೆ.
ಮೈಸೂರಿನ ಸುಬ್ಬರಾಯನ ಕೆರೆಯ ಮಧ್ಯ ಭಾಗದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ದಂಡಿಯಾತ್ರೆಯ ಸ್ಮಾರಕವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ಪ್ರತಿಮೆಯ ಕೈಯಲ್ಲಿದ್ದ ಕೋಲು, ಕನ್ನಡಕ ಹಾಗೂ ಎಡಗೈಯನ್ನು ಹಾನಿ ಮಾಡಿದ್ದಾರೆ.
ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಈ ರೀತಿಯಾದ ಘಟನೆಗಳಿಗೆ ಸೂಕ್ತವಾದ ಭದ್ರತೆಯಿಲ್ಲ. ಈ ಕೃತ್ಯ ಮಾದಕ ವ್ಯಸನಿಗಳಿಂದ ನಡೆದಿದೆ ಎಂದು ಆರೋಪಿಸಿದ್ದಾರೆ.