ರಾಂಚಿ, ನ. 06 (DaijiworldNews/MB) : ಮೇವು ಹಗರಣದ ಆರೋಪದಲ್ಲಿ ಈಗಾಗಲೇ ಜೈಲಿನಲ್ಲಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರ ಜಾರ್ಖಂಡ್ ಹೈಕೋರ್ಟ್ ಮುಂದೂಡಿದೆ.
ಈ ಜಾಮೀನು ಅರ್ಜಿಗೆ ಸಂಬಂಧಿಸಿ ಉತ್ತರ ಸಲ್ಲಿಕೆಗೆ ನ್ಯಾಯಾಲಯದಲ್ಲಿ ಸಿಬಿಐ ಪರ ವಕೀಲರು ಹೆಚ್ಚಿನ ಸಮಯವನ್ನು ಕೋರಿದ ಬಳಿಕ ನ್ಯಾಯಮೂರ್ತಿ ಅಪ್ರೇಶ್ ಸಿಂಗ್ಅವರ ಏಕ ಸದಸ್ಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆಯನ್ನು ಮುಂದೂಡಿ ನವೆಂಬರ್ 27ಕ್ಕೆ ಮುಂದಿನ ದಿನಾಂಕವೆಂದು ನಿಗದಿಪಡಿಸಿದೆ.
ಅನಾರೋಗ್ಯದ ಹಿನ್ನೆಲೆ ಪ್ರಸ್ತುತ, ಅವರು ರಿಮ್ಸ್ ನಿರ್ದೇಶಕರ ಬಂಗಲೆಯಲ್ಲಿ ವಾಸವಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿ ಮೂರು ಪ್ರಕರಣಗಳಲ್ಲಿ ಆರ್ಜೆಡಿ ಮುಖಂಡ ಶಿಕ್ಷೆಗೆ ಒಳಪಟ್ಟಿದ್ದಾರೆ.