ನವದೆಹಲಿ, ನ.06 (DaijiworldNews/PY): "ದೆಹಲಿಯಲ್ಲಿ ಶುಕ್ರವಾರ ವಾಯುಗುಣಮಟ್ಟ ಅತ್ಯಂತ ಕಳಪೆ ಗುಣಮಟ್ಟದಾಗಿದ್ದು, ಮುಂದಿನ 24 ಗಂಟೆಯಲ್ಲಿ ಇದು ಸ್ವಲ್ಪ ಸುಧಾರಿಸುವ ಸಾಧ್ಯತೆಯಿದೆ" ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ವರ್ಷದ ಡಿಸೆಂಬರ್ಗೆ ಹೋಲಿಸಿದರೆ ಗುರುವಾರದಂದು ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, ಕೃಷಿ ತ್ಯಾಜ್ಯ ಸುಡುವ ಕಾರಣ ಗಾಳಿಯ ಗುಣಮಟ್ಟ ಕೆಳಮಟ್ಟಕ್ಕೆ ಇಳಿದಿದೆ. ಶೇ.42ರಷ್ಟು ಮಾಲಿನ್ಯ ಕೃಷಿ ತ್ಯಾಜ್ಯ ಸುಡುವಿಕೆಯೊಂದಿಗೆ ಒಳಗೊಂಡಿದೆ.
"ಈ ವರ್ಷದ ಜನವರಿ ತಿಂಗಳಿನ ಬಳಿಕ ಮೊದಲ ಬಾರಿಗೆ ದೆಹಲಿಯಲ್ಲಿ ವಾಯುಗುಣಮಟ್ಟದ ಸೂಚ್ಯಂಕ ಕುಸಿತ ಕಂಡಿದ್ದು, ಪ್ರತಿಕೂಲ ಹವಾಮಾನ, ಶಾಂತ ಗಳಿ ಹಾಗೂ ಕಡಿಮೆ ತಾಪಮಾನ ಹಾಗೂ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವ ಕಾರಣ ಗಾಳಿಯ ಗುಣಮಟ್ಟದಲ್ಲಿ ಕುಸಿತ ಕಾಣುತ್ತಿದೆ" ಎಂದು ತಜ್ಞರು ತಿಳಿಸಿದ್ದಾರೆ.