ನವದೆಹಲಿ, ನ. 06 (DaijiworldNews/MB) : ''ಚೀನಾ ಗಡಿ ವಾಸ್ತವ ರೇಖೆ(ಎಲ್ಎಸಿ)ರ ಪೂರ್ವ ಲಡಾಕ್ನಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ'' ಎಂದು ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದರು.
''ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಾವುದೇ ಬದಲಾವಣೆಯನ್ನು ನಾವು ಒಪ್ಪಲಾರೆವು ಎಂದು ಹೇಳಿರುವ ಅವರು, ಗಡಿಯಲ್ಲಿ ಚೀನಾ ಸೇನೆಗೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡುತ್ತಿದ್ದು ಚೀನಾವು ನಿರೀಕ್ಷೆ ಮಾಡಿರದ ಪರಿಸ್ಥಿತಿಗೆ ಬಂದು ತಲುಪಿದೆ'' ಎಂದು ತಿಳಿಸಿದರು.
''ಗಡಿ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಅಪ್ರಚೋದಿತ ಕ್ರಮಗಳು ತೀರಾ ಖಂಡನೀಯ. ಹೀಗಿರುವಾಗಿ ನಮ್ಮ ದೇಶದ ನಿಲುವು ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಆದರೆ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯಿದೆ'' ಎಂದರು.