ಕೊಲ್ಕತ್ತಾ,ನ. 06 (DaijiworldNews/HR): ಗೋರ್ಖಾ ಜನಮುಕ್ತಿ ಮೋರ್ಚಾದ 17 ಮಂದಿ ಸದಸ್ಯರು ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ದು, ಇದೀಗ ಮತ್ತೆ ಜಿಜೆಎಂಗೆ ಮರಳಿದ್ದು ಬಿಜೆಪಿಗೆ ಹಿನ್ನಡೆಯಾಗಿದೆ.
ಈ ಕುರಿತು ಮಾತನಾಡಿದ ಜಿಜೆಎಂ ಸಂಸ್ಥಾಪಕ ಬಿಮಲ್ ಗುರುಂಗ್, ಗೋರ್ಖಾ ಜನಮುಕ್ತಿ ಮೋರ್ಚಾ 17 ಮಂದಿಯನ್ನು ಮತ್ತೆ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಈ ಎಲ್ಲ ಸದಸ್ಯರೂ ಬರುವ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಬಿಜೆಪಿಗೆ ಡಾರ್ಜಿಲಿಂಗ್ ಪಾಲಿಕೆಯ 17 ಮಂದಿ ಜಿಜೆಎಂ ಸದಸ್ಯರು ಕಳೆದ ಜೂನ್ನಲ್ಲಿಸೇರ್ಪಡೆಗೊಂಡಿದ್ದು, ಬಿಜೆಪಿಯು 32 ಸದಸ್ಯ ಬಲದ ಪಾಲಿಕೆಯಲ್ಲಿ ಬಹುಮತ ಸಾಧಿಸಿತ್ತು.