ಬೆಂಗಳೂರು,ನ. 06 (DaijiworldNews/HR): ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕರನ್ನು ಎದುರಿಸಲಾಗದೇ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮೊದಲಿನಿಂದಲೂ ಮಾಡಿಕೊಂಡು ಬಂದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸಮಾಜಮುಖಿ, ಅಭಿವೃದ್ಧಿಪರ ಚಿಂತನೆಗಳರಿಯದ ಬಿಜೆಪಿಯು, ಕಾಂಗ್ರೆಸ್ ನಾಯಕರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ದಿಕ್ಕುತಪ್ಪಿಸುವ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮಾಡುವುದು ಮೊದಲಿಂದಲೂ ಮೇಲಿನಿಂದ ಕೆಳಗಿನ ನಾಯಕರವರೆಗೂ ರೂಢಿಸಿಕೊಂಡು ಬಂದ ಚಾಳಿ ಬಿಜೆಪಿಗಿದೆ.
ಇನ್ನು ಐಎಎಸ್ ಅಧಿಕಾರಿ ಡಿ.ಕೆ ರವಿ ಆತ್ಮಹತ್ಯೆಯಲ್ಲಿ ಬಿಜೆಪಿ ನಾಯಕರು ಸುಳ್ಳಿನ ರಾಜಕೀಯ ಮಾಡಿದರು, ಆದರೆ ಸಿಬಿಐ ತನಿಖೆಯಲ್ಲಿ ಸತ್ಯ ಗೆದ್ದಿತು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯಲ್ಲಿ ಕುತಂತ್ರ ರಾಜಕೀಯ ಮಾಡಿದರು ಹೈಕೋರ್ಟಿನಲ್ಲಿ ಸತ್ಯ ಗೆದ್ದಿದೆ. ಈಗ ವಿನಯ್ ಕುಲಕರ್ಣಿ ಅವರನ್ನು ಗುರಿಯಾಗಿಸಿದ್ದಾರೆ, ಸತ್ಯ ಗೆಲ್ಲುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದೆ.