ನವದೆಹಲಿ, ನ. 05 ( DaijiworldNews/HR): ದೆಹಲಿಯಲ್ಲಿ ಕೊರೊನಾ ದಿನೇದಿನೇ ಹೆಚ್ಚುತ್ತಿದ್ದೆ, ಜೊತೆಗೆ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದೆ ಆದ ಕಾರಣ ಈ ವರ್ಷದ ದೀಪಾವಳಿಯಲ್ಲಿ ಪಟಾಕಿ ಹಚ್ಚಬಾರದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು,ದೆಹಲಿಯಾದ್ಯಂತ ದೀಪಾವಳಿ ಸಂದರ್ಭದಲ್ಲಿ ನಮ್ಮ ಸರ್ಕಾರ ವಿಶೇಷವಾಗಿ ನವೆಂಬರ್ 14ರಂದು 'ಲಕ್ಷ್ಮಿ ಪೂಜೆ'ಯನ್ನು ಆಯೋಜಿಸುತ್ತಿದ್ದು, ಟಿವಿ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದ್ದು, ನಾಗರಿಕರು ಮನೆಯಲ್ಲೇ ಕುಳಿತು ಟಿವಿ ಅಥವಾ ಆನ್ಲೈನ್ ಮೂಲಕ ಪೂಜೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ಹಾಗೂ ವಾಯುಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿಯ ದೀಪಾವಳಿಯಂದು ಜನರು ಪಟಾಕಿಯಿಂದ ದೂರವಿರಬೇಕು ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ.