ಪಾಟ್ನಾ, ನ.05 (DaijiworldNews/PY): "ಇದು ನನ್ನ ಕೊನೆಯ ಚುನಾವಣೆ" ಎಂದು ಬಿಹಾರ ಸಿಎಂ, ಜೆಡಿಯು ನಾಯಕ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಈ ಬಗ್ಗೆ ಲೋಕ್ಜನ ಶಕ್ತಿ ಪಕ್ಷದ ನಾಯಕ ಅಜಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, "ನಿತೀಶ್ ಅವರು ಯಾವಾಗಲೂ ನಿವೃತ್ತಿಯ ಪರವಾಗಿದ್ದರು. ಸದ್ಯ ಸಿಎಂ ಆಗುವ ಹೊಸ ಮುಖವನ್ನು ಘೋಷಣೆ ಮಾಡಬೇಕಾಗಿತ್ತು" ಎಂದಿದ್ದಾರೆ.
ಚುನಾವಣೆ ಹಿನ್ನೆಲೆ ಪೂರ್ನಿಯಾದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ನಿತೀಶ್ ಕುಮಾರ್, "ಇದು ನನ್ನ ಕೊನೆಯ ಚುನಾವಣೆ" ಎಂದಿದ್ದಾರೆ.
ನಿತೀಶ್ ಕುಮಾರ್ ಅವರ ಘೋಷಣೆಯನ್ನು ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿ ನಾಯಕ ಉಪೇಂದ್ರ ಕುಶ್ವಾಹ ಸ್ವಾಗತಿಸಿದ್ದಾರೆ.
"ನಿತೀಶ್ ಅವರು ಕೇವಲ ರಾಜಕೀಯ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಮುನ್ಸೂಚನೆಯನ್ನು ಗ್ರಹಿಸಿದ್ದಾರೆ. ಹಾಗಾಗಿ ಈ ಘೋಷಣೆ ಮಾಡಿದ್ದಾರೆ. ಇದು ಮತದಾರರನ್ನು ತನ್ನತ್ತ ಸೆಳೆಯುವ ತಂತ್ರವಾಗಿದೆ" ಎಂದು ವಿರೋಧ ಪಕ್ಷದ ನಾಯಕರು ಆರೋಪ ಮಾಡಿದ್ದಾರೆ.