ಪಣಜಿ,ನ. 05 ( DaijiworldNews/HR): ಬಾಲಿವುಡ್ ನಟಿ ಪೂನಂ ಪಾಂಡೆ ಅವರನ್ನು ಅಶ್ಲೀಲ ವಿಡಿಯೋ ಚಿತ್ರೀಕರಣದ ಆರೋಪದ ಮೇಲೆ ಉತ್ತರ ಗೋವಾ ಪೊಲೀಸರು ಇಂದು ಬಂಧಿಸಿದ್ದಾರೆ.
ಈ ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಗೋವಾದ ಚಪೋಲಿ ಡ್ಯಾಮ್ ಬಳಿ ನಡೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದಾಗಿ ಗೋವಾ ಜನತೆಯ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಗೋವಾ ಫಾರ್ವರ್ಡ್ ಪಾರ್ಟಿಯ ಮಹಿಳಾ ಸದಸ್ಯರು ಬುಧವಾರ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಉತ್ತರ ಗೋವಾ ಪೊಲೀಸರು ಗುರುವಾರ ನಟಿ ಪೂನಂ ಪಾಂಡೆಯನ್ನು ಬಂಧನ ಮಾಡಿದ್ದಾರೆ.
ಅನುಮತಿ ಇಲ್ಲದೆಯೇ ಅಣೆಕಟ್ಟು ಪ್ರದೇಶದ ಒಳಗೆ ಪ್ರವೇಶಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ಜಲಸಂಪನ್ಮೂಲ ಇಲಾಖೆಯೂ ಕೂಡಾ ಪೊಲೀಸರಿಗೆ ದೂರು ನೀಡಿತ್ತು.
ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಗೆಳೆಯ ಸ್ಯಾಮ್ನನ್ನು ವಿವಾಹವಾಗಿದ್ದ ಪೂನಂ ಗೋವಾಕ್ಕೆ ಬಂದಿದ್ದು ಆ ವೇಳೆ ತನ್ನ ಪತಿಯ ವಿರುದ್ದ ಕಿರುಕುಳ ದೂರು ನೀಡಿದ್ದರು. ಈ ಹಿನ್ನೆಲೆ ಗೋವಾ ಪೊಲೀಸರು ಸ್ಯಾಮ್ನನ್ನು ಬಂಧಿಸಿದ್ದು ಬಳಿಕ ಸ್ಯಾಮ್ ಜಾಮೀನಿನ ಮೂಲಕ ಹೊರಬಂದಿದ್ದರು.