ಹೈದರಾಬಾದ್, ನ. 05 ( DaijiworldNews/HR): ಹೈದರಾಬಾದ್ ನ ಮಿಯಾಪುರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ದುಷ್ಕರ್ಮಿಗಳು 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದ್ದು, ಮಹಿಳೆಯನ್ನು ಕೊಲ್ಲೂರು ತಾಂಡಾದ ಮೂವರು ಪುರುಷರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮಹಿಳೆಯು ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಯು ತನ್ನ ಗಂಡನ ಸಾವಿನ ಬಳಿಕ ಕೊಲ್ಲೂರ ಸಮೀಪದ ಆರ್ ಸಿ ಪುರಂ ಹೊರ ವಲಯದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೂರು ದಿನಗಳ ಹಿಂದೆ ಮಿಯಾಪುರದಲ್ಲಿರುವ ತನ್ನ ತಾಯಿಯ ಮನೆಗೆ ತೆರಳುತ್ತಿದ್ದ ಸಂಧರ್ಭದಲ್ಲಿ ಮೂವರು ಪುರುಷರು ಆಕೆಯನ್ನು ಅಪಹರಣ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಗೆ ಬಲವಂತವಾಗಿ ಮಧ್ಯ ಸೇವಿಸುವಂತೆ ಮಾಡಿ ಬಳಿಕ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅತ್ಯಾಚಾರ ನಡೆದು ಮೂರು ದಿನಗಳ ಬಳಿಕ ಅದೇ ರಸ್ತೆಯಲ್ಲಿ ಸಾಗುತ್ತಿದ್ದವರು ಒಬ್ಬರು ಮಹಿಳೆ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕಾಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.