ಚಂಡೀಗಡ, ನ. 05 ( DaijiworldNews/HR): ಪಂಜಾಬ್ ರಾಜ್ಯದಲ್ಲಿ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ರೈಲು ಸೇವೆಗಳು ಸ್ಥಗಿತವಾಗಿದ್ದು, ಅಲ್ಲಿನ ಈ ಪರಿಸ್ಥಿತಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜವಾಬ್ದಾರಿಯಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ನಡ್ಡಾ, ಪಂಜಾಬ್ ಸರಕಾರವು ಸುಪ್ರೀಂಕೋರ್ಟ್ನ ನಿರ್ದೇಶನದ ಹೊರತಾಗಿಯೂ ರೈತರಿಗೆ ಪ್ರತಿಭಟನೆ ನಡೆಸಲು ಬೆಂಬಲ ನೀಡಿದೆ, ಹಾಗಾಗಿ ಇಂದಿನ ದುರದೃಷ್ಟಕರ ಪರಿಸ್ಥಿತಿಗೆ ಮುಖ್ಯಮಂತ್ರಿ ಗಳೇ ಸಂಪೂರ್ಣ ಹೊಣೆಗಾರರು ಎಂದು ನಡ್ಡಾ ಆರೋಪಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ನಡ್ಡಾಗೆ ಬಹಿರಂಗ ಪತ್ರ ಬರೆದಿದ್ದು, ರಾಜ್ಯದಲ್ಲಿ ಗೂಡ್ಸ್ ರೈಲುಗಳ ಸ್ಥಗಿತದ ಕಾರಣ ರಾಜ್ಯಕ್ಕೆ ಅಗತ್ಯವಸ್ತುಗಳ ಪೂರೈಕೆ ನಿಂತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದರು.