ಅಹಮದಾಬಾದ್,ನ. 04 (DaijiworldNews/HR): ಗುಜರಾತ್ನ ರಾಸಾಯನಿಕ ಗೋದಾಮಿನ ಪಕ್ಕದಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿದ್ದು, ಗೋದಾಮಿನ ಭಾಗವೊಂದು ಕುಸಿದ ಕಾರಣ 6 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ, ಕಟ್ಟಡದ ಅವಶೇಷದಿಂದ 14 ಮಂದಿಯನ್ನು ಹೊರ ತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಎಲ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಹೇಳಿದ್ದಾರೆ.
ಇನ್ನು ಆಸ್ಪತ್ರೆಗೆ ದಾಖಲಾಗಿದ್ದ 14 ಜನರ ಪೈಕಿ ಆರು ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿದ್ದ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಹಮದಾಬಾದ್ನ ಕೈಗಾರಿಕಾ ಪ್ರದೇಶದ ಪಿರಾನಾ-ಪಿಪ್ಲಾಜ್ ರಸ್ತೆಯಲ್ಲಿರುವ ಗೋದಾಮಿನ ವಸತಿ ಕಟ್ಟಡದಲ್ಲಿ ಬೆಂಕಿಯಿಂದ ಸ್ಫೋಟ ಸಂಭವಿಸಿದೆ ಎಂದು ಡಿಸಿಪಿ ಅಶೋಕ್ ಮುನಿಯಾ ತಿಳಿಸಿದ್ದಾರೆ.