ಪಾಟ್ನಾ,ನ. 04 (DaijiworldNews/HR): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಿರುವಾಗ ಅವರ ಮೇಲೆ ಈರುಳ್ಳಿ ಎಸೆದ ಘಟನೆಯನ್ನು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರ ಮೇಲೆ ಈರುಳ್ಳಿ ಘಟನೆಯನ್ನು ನಾನು ಖಂಡಿಸುತ್ತೇನೆ, ಇಂತಹ ಘಟನೆ ನಡೆಯಬಾರದಿತ್ತು. ನಾವು ವಿಷಯಾಧರಿತವಾಗಿ ಹೋರಾಡುತ್ತಿರುವಾಗ ಇಂತಹ ಘಟನೆಗಳು ನಡೆಯುತ್ತಿರುವುದು ನನಗಿಷ್ಟವಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಹಾರವು ನಿರುದ್ಯೋಗ, ವಲಸೆ ಮುಂತಾದ ವಿಚಾರಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದು, ವಲಸಿಗ ಕಾರ್ಮಿಕರನ್ನು ಸರಕಾರ ಕಟುವಾಗಿ ನಡೆಸಿಕೊಂಡಿದ್ದು, ಅವರನ್ನು ಕ್ರಿಮಿನಲ್ ಎಂದೂ ಕರೆಯಲಾಗಿತ್ತು. ಇನ್ನು ಬಿಹಾರ ಸರಕಾರ ಉದ್ಯೋಗ ನೀಡುವುದಾಗಿ ಹೇಳಿಕೊಂಡಿದ್ದರೂ ಯಾರಿಗೂ ಕೆಲಸ ದೊರಕಿಲ್ಲ. ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆಯೂ ಅವರು ಗಮನ ಹರಿಸಿಲ್ಲ, ಕೇಂದ್ರದ ಯಾವುದೇ ತಂಡ ಬಂದಿಲ್ಲ ಎಂದು ಹೇಳಿದ್ದಾರೆ.