ಮುಂಬೈ,ನ. 04 (DaijiworldNews/HR): ಬಾಲಿವುಡ್ ಹಿರಿಯ, ಜನಪ್ರಿಯ ಸಿನಿಮಾ ನಾಯಕ ನಟ ಫರಾಜ್ ಖಾನ್ (50) ಇಂದು ನಿಧನರಾಗಿದ್ದಾರೆ.
ಈ ಕುರಿತ ವಿಷಯವನ್ನು ನಟಿ ಪೂಜಾ ಭಟ್ ಟ್ವೀಟ್ ಮಾಡಿದ್ದು, ''ನಟ ಫರಾಜ್ ಖಾನ್ ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ಸುದ್ದಿಯನ್ನು ಅತ್ಯಂತ ಭಾರವಾದ ಹೃದಯದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ'' ಎಂದು ಫರಾಜ್ ಖಾನ್ರ ಹಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
ಫರಾಜ್ಖಾನ್ ಅವರಿಗೆ ಸರ್ಪಸುತ್ತು ಆಗಿದ್ದು, ಬಳಿಕ ಅದು ಹೃದಯದಿಂದ ಮಿದುಳಿನವರೆಗೆ ಪಸರಿಸಿತ್ತು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ನಿಧನರಾಗಿದ್ದಾರೆ.