ಮುಂಬೈ, ನ. 04 (DaijiworldNews/MB) : ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ದೂಷಣೆ ಮಾಡಲು 1.5 ಲಕ್ಷ ನಕಲಿ ಟ್ವಿಟರ್ ಖಾತೆ ಬಳಕೆ ಮಾಡಲಾಗಿದೆ ಎಂದು ಸೈಬರ್ ತಜ್ಞರ ತಂಡವು ಪತ್ತೆ ಹಚ್ಚಿದೆ.
ಶೇ .80 ನಕಲಿ ಟ್ವೀಟ್ ಖಾತೆಗಳಿಂದ ನಟನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧವಾಗಿ ಟ್ವೀಟ್ ಮತ್ತು ರೀಟ್ವೀಟ್, ಕಾಮೆಂಟ್ಗಳನ್ನು ಮಾಡಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ವಿಷಯಗಳನ್ನು ಹರಡಲು ಬಳಸಲಾಗುತ್ತಿದ್ದ ಅನೇಕ ಟ್ವಿಟರ್ ಖಾತೆಗಳು ವಿವಿಧ ದೇಶಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತಿರುವ ಬಾಟ್ ಟ್ವೀಟರ್ ಖಾತೆಗಳಾಗಿವೆ. ಹಾಗೆಯೇ ನಕಲಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ಅವರ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.