ಚೆನ್ನೈ, ನ. 04 (DaijiworldNews/MB) : ಆನ್ಲೈನ್ ಸ್ಪೋರ್ಟ್ಸ್ ಆಪ್ಗಳ ಜಾಹೀರಾತು ನೀಡಿದಕ್ಕಾಗಿ ಮದ್ರಾಸ್ ಹೈಕೋರ್ಟ್ ಮಂಗಳವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಈ ಆಪ್ನಲ್ಲಿ ನಡೆದ ಕ್ರಿಕೆಟ್ ಲೀಗ್ ಜೂಜಾಟದಲ್ಲಿ ಹಣ ಕಳೆದುಕೊಂಡ ಬಳಿಕ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ವಕೀಲ ಮೊಹಮ್ಮದ್ ರಿಜ್ವಿ ಈ ಪ್ರಕರಣ ದಾಖಲಿಸಿದ್ದಾರೆ.
ಗಂಗೂಲಿ ಮೈ11 ಸರ್ಕಲ್ನ ಪ್ರಚಾರಕರಾಗಿದ್ದು ಕೊಹ್ಲಿ ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ ಮೊಬೈಲ್ ಪ್ರೀಮಿಯರ್ ಲೀಗ್ನ ಪ್ರಚಾರಕರಾಗಿದ್ದಾರೆ. ಫ್ಯಾಂಟಸಿ ಲೀಗ್ಗಳ ಪ್ರಚಾರದಲ್ಲಿ ಇತರ ಕ್ರಿಕೆಟಿಗರು ಸಹ ತೊಡಗಿಸಿಕೊಂಡಿದ್ದಾರೆ.
ಈ ಆಪ್ಗಳು ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ), ರಾಜಸ್ಥಾನ್ ರಾಯಲ್ಸ್ (ಆಆರ್) ಹಾಗೂ ಕೆಲವು ರಾಜ್ಯದ ಹೆಸರಿನಲ್ಲಿದೆ. ಹಾಗಾದರೇ ಈ ಆನ್ಲೈನ್ ಗೇಮ್ನಲ್ಲೂ ಈ ತಂಡಗಳು ರಾಜ್ಯದ ಪರವಾಗಿ ಆಡುತ್ತಿದೆಯೇ" ಎಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಧುರೈ ಪ್ರಶ್ನಿಸಿದ್ದು ಆನ್ಲೈನ್ ಗೇಮ್ ಮೂಲಕ ತಾವು ಹಣ ಗಳಿಸಲು ಈ ರೀತಿ ಸೆಲೆಬ್ರೆಟಿಗಳನ್ನು ಬಳಸಿದಕ್ಕಾಗಿ ಮದ್ರಾಸ್ ಹೈಕೋರ್ಟ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದೆ.