ನವದೆಹಲಿ, ನ. 04 (DaijiworldNews/MB) : ಅಮೇರಿಕಾದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾಗಲಿ ಎಂದು ಹಿಂದೂ ಸೇನಾ ಯಜ್ಞ ನಡೆಸಿದೆ.
ಟ್ರಂಪ್ ಅವರ ಫೋಟೋಗಳು ಸುತ್ತಲೂ ಇರಿಸಿ ಯಜ್ಷ ಕುಂಡಕ್ಕೆ ತುಪ್ಪ ಸುರಿದು ಸ್ತುತಿಗೀತೆಗಳು ಜಪಿಸಲಾಯಿತು. "ದುಷ್ಟ ಇಸ್ಲಾಮಿಕ್ ಭಯೋತ್ಪಾದನೆಯಿಂದ ಈ ವಿಶ್ವವನ್ನು ಉಳಿಸಬೇಕಾದರೆ ಯುಎಸ್ಎ ಮತ್ತು ಇಡೀ ಜಗತ್ತಿಗೆ ಟ್ರಂಪ್ ಅಗತ್ಯವಿದೆ" ಎಂದು ಈ ಸಂಘಟನೆ ಹೇಳಿದೆ.
ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ತೋರಿಸಿದ್ದಕ್ಕಾಗಿ ಫ್ರಾನ್ಸ್ನಲ್ಲಿ ಶಿರಚ್ಛೇಧನಕ್ಕೆ ಒಳಗಾದ 47 ವರ್ಷದ ಫ್ರೆಂಚ್ ಶಿಕ್ಷಕ ಸ್ಯಾಮ್ಯುಯೆಲ್ ಪಾಟಿ ಪರ ನಿಂತ ವಿಷ್ಣು ಗುಪ್ತಾ ಈ ಯಜ್ಞವನ್ನು ನಡೆಸುವ ನೇತೃತ್ವ ವಹಿಸಿದ್ದಾರೆ.
'ಯಜ್ಞ' ಕುಂಡದ ಸುತ್ತಲೂ ಹೂವುಗಳು ಇರಿಸಿ ಮತ್ತು ದೀಪಗಳನ್ನು ಹಚ್ಚಲಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ಸಹ ಇರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಪ್ತಾ, "ಇಸ್ಲಾಮಿಕ್ ಭಯೋತ್ಪಾದಕರು ಇಸ್ಲಾಂ ಧರ್ಮದ ಹೆಸರಿನಲ್ಲಿ ಮುಗ್ಧ ಜನರ ಶಿರಚ್ಛೇಧನ ಮಾಡುತ್ತಿದ್ದಾರೆ. ಅವರು ನಮ್ಮ ವಿರುದ್ಧ ಯುದ್ಧ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ನಾವು ಒಂದಾಗಬೇಕು, ಹೋರಾಡಬೇಕು. ಅದಕ್ಕಾಗಿ ಅಮೇರಿಕಾದಲ್ಲಿ ಟ್ರಂಪ್ ಅಧ್ಯಕ್ಷರಾಗುವ ಅಗತ್ಯ ನಮಗಿದೆ" ಎಂದಿದ್ದಾರೆ.