ಬೆಂಗಳೂರು, ನ.03 (DaijiworldNews/PY): ಹಿರಿಯ ನಟ, ರಂಗಕರ್ಮಿ ಹೆಚ್.ಜಿ.ಸೋಮಶೇಖರ್ ರಾವ್ (86) ಅವರು ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಮಂಗಳವಾರ ಮಧ್ಯಾಹ್ನ12.30ರ ಸುಮಾರಿಗೆ ನಿಧನರಾಗಿದ್ದಾರೆ.
ಇವರು ಸಾಹಿತ್ಯ, ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು.
ಸೋಮಶೇಖರ್ ಅವರು ಹೂಮಳೆ, ನಂ. 27 ಮಾವಳ್ಳಿ ಸರ್ಕಲ್, ಹರಕೆಯ ಕುರಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ದತ್ತಣ್ಣ ಅವರ ಸಹೋದರ. ಇವರಿಬ್ಬರೂ ಕುರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಬ್ಯಾಂಕ್ನಲ್ಲಿ ಅಧಿಕಾರಿಯಾಗಿದ್ದ ಇವರು 1981ರಲ್ಲಿ ಚಿತ್ರೋದ್ಯಮಕ್ಕೆ ಪ್ರವೇಶಿಸಿದ್ದು, ಸಾವಿತ್ರಿ ಇವರ ಮೊದಲ ಚಿತ್ರವಾಗಿದೆ.
ರವಿ ನಿರ್ದೇಶನದ ಮಿಥಿಲೆಯ ಸೀತೆಯರು ಸಿನೆಮಾ ಸೋಮಶೇಖರ್ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಹರಕೆಯ ಕುರಿ ಚಿತ್ರಕ್ಕೆ ಸೋಮಶೇಖರ್ ಅವರಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿತ್ತು.