ಬೆಂಗಳೂರು, ನ.03 (DaijiworldNews/PY): "ನಾನೇ ಬಿಜೆಪಿ ಅಭ್ಯರ್ಥಿ ಎಂದು ಮತದಾನ ಮಾಡಿದ್ದೇನೆ" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸಚಿವ ಆರ್. ಆಶೋಕ್ ಹಾಗೂ ಅವರ ಪತ್ನಿ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮತದಾನದ ಬಳಿಕ ಮಾತನಾಡಿದ ಅವರು, "ನಾನೇ ಬಿಜೆಪಿ ಅಭ್ಯರ್ಥಿ ಎಂದು ಇಂದು ಮತದಾನ ಮಾಡಿದ್ದೇನೆ. ಕಳೆದ 15 ದಿನಗಳಲ್ಲಿ ಏನು ಮಾಡಬೇಕು, ಏನು ಕೇಳಬೇಕು ಎಲ್ಲವನ್ನು ಮಾಡಿದ್ದೇವೆ. ಇದೀಗ ಇಂದು ನಿಮ್ಮ ಸರದಿ. ಬೆಂಗಳೂರು ಹಾಗೂ ಆರ್.ಆರ್.ನಗರ ಅಭಿವೃದ್ದಿಗಾಗಿ ಮತದಾನ ಮಾಡಿ" ಎಂದಿದ್ದಾರೆ.