ಗಾಂಧಿನಗರ, ನ. 03 (DaijiworldNews/MB) : ಮತ ಚಲಾಯಿಸಿ ಹಿಂದಿರುಗಿದ ಮತದಾರರಿಗೆ ಗುಜರಾತ್ನಲ್ಲಿ ಬಿಜೆಪಿ ಕಾರ್ಯಕರ್ತರು ಹಣ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಪ್ರತಿಪಕ್ಷ ಕಾಂಗ್ರೆಸ್ ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಈ ಕುರಿತಾಗಿ ಕಾಂಗ್ರೆಸ್ ವಕ್ತಾರ ಜಯರಾಜ್ ಸಿನ್ಹಾ ಪರ್ಮಾರ್ ದೂರು ದಾಖಲಿಸಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಇಒ ಡಾ. ಮುರಳಿಕೃಷ್ಣ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಕರ್ಜನ್ ಕ್ಷೇತ್ರದ ಮತದಾನ ಕೇಂದ್ರದಿಂದ ಮತ ಚಲಾಯಿಸಿದ ಬಳಿಕ ಮತದಾರರು ವಾಪಾಸ್ ತೆರಳುವಾಗ ಬಿಜೆಪಿ ಕಾರ್ಯಕರ್ತರು ಹಣವನ್ನು ನೀಡುವುದನ್ನು ವಿಡಿಯೋ ಮಾಡಲಾಗಿದೆ.