ಭೂಪಾಲ್, ನ. 03 (DaijiworldNews/MB) : ''ಲವ್ ಜಿಹಾದ್ ತಡೆಗಟ್ಟಲು ರಾಜ್ಯದಲ್ಲಿ ಕಾನೂನು ರೂಪಿಸಲಾಗುವುದು'' ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಮ್ ಸೋಮವಾರ ಹೇಳಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಹರಿಯಾಣ ಮುಖ್ಯಮಂತ್ರಿ ಎಂಎಲ್ ಕಟ್ಟರ್ ಲವ್ ಜಿಹಾದ್ ವಿರುದ್ದ ಕಾನೂನು ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದರು. ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಕೂಡಾ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ಹಾಮ್ ಅವರು, ''ಪ್ರೀತಿಯ ನೆಪದಲ್ಲಿ ಜಿಹಾದ್ ನಡೆಸಬಾರದು. ಇದನ್ನು ತಡೆಗಟ್ಟಲು ಕಾನೂನು ಜಾರಿಗೆ ತರಲಾಗುವುದು'' ಎಂದು ಹೇಳಿದ್ದಾರೆ.