ನವದೆಹಲಿ, ನ. 02 (DaijiworldNews/MB) : ದೇಶದಲ್ಲಿ ಉಂಟಾಗಿರುವ ಹಣದುಬ್ಬರದ ಸಮಸ್ಯೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ''ದೀಪಾವಳಿ ಪ್ರಯುಕ್ತ ಜನತೆಗೆ ಬಿಜೆಪಿಯಿಂದ ಹಣದುಬ್ಬರ ಉಡುಗೊರೆ'' ಎಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.
ಇಬ್ಬರೂ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ ಹಣದುಬ್ಬರದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ''ದೇಶದ ಜನರು ಮಾರುಕಟ್ಟೆ ಕೇಳಿದರು. ಆದರೆ ಪಿಎಂ ನರೇಂದ್ರ ಮೋದಿಯವರು ತೀವ್ರ ಹಣದುಬ್ಬರವನ್ನು ನೀಡಿದ್ದಾರೆ'' ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿ, ''ದೇಶದ ಜನತೆಗೆ ಬಿಜೆಪಿಯು ಭಾರೀ ಹಣದುಬ್ಬರವನ್ನು ಉಡುಗೊರೆಯಾಗಿ ನೀಡಿದೆ. ಹಾಗೆಯೇ ತನ್ನ ಬಂಡವಾಳಶಾಹಿ ಸ್ನೇಹಿತನಿಗೆ ಬಿಜೆಪಿಯು 6 ವಿಮಾನ ನಿಲ್ದಾಣಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದೆ. ಬಂಡವಾಳಶಾಹಿಗಳೊಂದಿಗೆ, ಬಂಡವಾಳಶಾಹಿಗಳ ಅಭಿವೃದ್ದಿ'' ಎಂದಿದ್ದಾರೆ.