ನವದೆಹಲಿ, ನ.02 (DaijiworldNews/PY): ವೀಸಾ ಇಯಮ ಉಲ್ಲಂಘನೆ ಸಂಬಂಧಿಸಿದ ತಬ್ಲೀಗಿ ಜಮಾತ್ನ ವಿದೇಶಿ ಸದಸ್ಯರ ವಿರುದ್ದದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಸೋಮವಾರ ಸುಪ್ರೀಂ ಕೋರ್ಟ್ ಜಿಲ್ಲಾ ನ್ಯಾಯಾಲಯಗಳಿಗೆ ಸೂಚಿಸಿದೆ.
ಈ ಸಂಬಂಧ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠವು ನಿರ್ದೇಶನ ನೀಡಿತು.
ದೆಹಲಿಯಲ್ಲಿ ನಡೆದ ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ನ.20ಕ್ಕೆ ನಿಗದಿಪಡಿಸಿತ್ತು.
ಸದಸ್ಯರ ಪರವಾಗಿ ಹಿರಿಯ ವಕೀಲ ಮನೇಕಾ ಗುರುಸ್ವಾಮಿ ಅವರು ಹಾಜರಿದ್ದು,ಎಂಟು ಸದಸ್ಯರ ಸಂಬಂಧಿಸಿದ ಬಿಡುಗಡೆ ಅರ್ಜಿಯ ವಿಚಾರಣೆಗಳನ್ನು ನ.10ಕ್ಕೆ ಕೆಳಹಂತದ ಕೋರ್ಟ್ಗಳಲ್ಲಿ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು.