ಲಖನೌ, 02 (DaijiworldNews/HR): ಬಹುಜನ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಪಕ್ಷದ ಸಿದ್ದಾಂತಗಳು ಪರಸ್ಪರ ವಿರುದ್ಧವಾಗಿದೆ. ನಮ್ಮ ಪಕ್ಷ ಎಂದಿಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಬದಲಾಗಿ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಂಬರುವ ಯಾವುದೇ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ಸಾಧ್ಯವಿಲ್ಲ. ಕೋಮುವಾದಿ ಪಕ್ಷದ ಜೊತೆಗೆ ನಮ್ಮ ಸಮಾಜವಾದಿ ಪಕ್ಷ ಸ್ಪರ್ಧೆ ನಡೆಸುವುದಿಲ್ಲ ಎಂದರು.
ಇನ್ನು ಇಂತಹ ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಬದಲಾಗಿ ಸನ್ಯಾಸ ಸ್ವೀಕರಿಸಲು ಬಯಸುತ್ತೇನೆ. ಕೋಮುವಾದಿ, ಜಾತೀಯವಾದಿ ಪಕ್ಷಗಳು ಮತ್ತು ಬಂಡವಾಳಶಾಹಿ ಪಡೆಗಳ ವಿರುದ್ಧ ಎಲ್ಲ ರೀತಿಯಲ್ಲಿ ಹೋರಾಡಲಿದ್ದೇನೆ ಎಂದು ಹೇಳಿದ್ದಾರೆ.