ಪಾಟ್ನಾ 02 (DaijiworldNews/HR): ಬಿಹಾರದಲ್ಲಿ ಹತ್ತು ಲಕ್ಷ ಸರ್ಕಾರಿ ಉದ್ಯೋಗಗಳ ಸೃಷ್ಟಿಗೆ ವರ್ಷಕ್ಕೆ 1.44 ಲಕ್ಷ ಕೋಟಿ ವೆಚ್ಚವಾಗಲಿದೆ, ಅದಕ್ಕೆ ಬೇಕಾದ ಹಣವನ್ನು ಆರ್ಜೆಡಿ ಮುಖಂಡ ತೇಜಸ್ವಿಯಾದವ್ ಎಲ್ಲಿಂದ ತರುತ್ತಾರೆ ಮತ್ತು ಜನತೆಗೆ ಕೊಟ್ಟಿರುವ ಭರವಸೆ ಈಡೇರಿಸಲು ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಾರೋ ಎಂಬುದಾಗಿ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ತೇಜಸ್ವಿ ಯಾದವ್ ಅವರು, ಮಹಾಘಟಬಂಧನ್ಗೆ ಮತ ಚಲಾಯಿಸಿ ಗೆಲ್ಲಿಸಿದರೆ, ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಮಂಜೂರು ಮಾಡುವುದಾಗಿ ನೀಡಿದ ಭರವಸೆ ಕುರಿತು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ನಿತೀಶ್ ಕುಮಾರ್ ತೇಜಸ್ವಿ ಅವರಿಗೆ ಅಷ್ಟು ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗ ಸೃಷ್ಟಿಮಾಡಲು ಅಸಾಧ್ಯ. ಅಂತೆಯೇ ಅವರಿಗೆ ಆಡಳಿತ ನಡೆಸಲು ಅವಕಾಶವೂ ಸಿಗುವುದಿಲ್ಲ. ಅವರು ಹೇಳಿದಂತೆ ಉದ್ಯೋಗ ಸೃಷ್ಟಿಸುವುದಾದರೆ, ವರ್ಷಕ್ಕೆ 1.44 ಲಕ್ಷ ಕೋಟಿ ವೆಚ್ಚವಾಗುತ್ತದೆ್ ಎಂದು ಹೇಳಿದ್ದಾರೆ.