ಮುಂಬೈ, ನ. 02 (DaijiworldNews/MB) : ಬೋಳು ತಲೆ ಮರೆಮಾಚಿದ ಆರೋಪದಲ್ಲಿ ಪತಿಯ ವಿರುದ್ದ ಪತ್ನಿ ನಂಬಿಕೆ ದ್ರೋಹ ದೂರು ದಾಖಲಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಗ್ರಾಮೀಣ ನಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ 27 ವರ್ಷದ ಮಹಿಳೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ತನ್ನ 29 ವರ್ಷದ ಪತಿಯು ತನ್ನ ಪತಿಯ ತಲೆ ಬೋಳಾಗಿದ್ದು ಆದರೆ ಅದನ್ನು ನನ್ನಿಂದ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಪತಿಯು ಜಾಮೀನಿಗಾಗಿ ಥಾಣೆ ನ್ಯಾಯಾಲಯದ ಕದ ತಟ್ಟಿದ್ದು ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿದೆ. ಈ ದಂಪತಿಯು ಕಳೆದ ತಿಂಗಳು ವಿವಾಹವಾಗಿದ್ದರು.
ಪತಿ ವಿಗ್ ಧರಿಸಿರುವುದನ್ನು ತಿಳಿದು ಆಘಾತಕ್ಕೊಳಗಾಗಿದ್ದೇನೆ. ಮದುವೆಗೂ ಮುನ್ನ ಅವರು ಈ ವಿಚಾರವನ್ನು ತಿಳಿಸಿರಲಿಲ್ಲ. ಅವರ ತಲೆ ಬೋಳು ಎಂದು ತಿಳಿದಿದ್ದರೆ ನಾನು ಅವರನ್ನು ವಿವಾಹವೇ ಆಗುತ್ತಿರಲಿಲ್ಲ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.