ಸಿಮ್ಡೆಗಾ, ನ. 02 (DaijiworldNews/MB) : ಸಿಮ್ಡೆಗಾ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ(ಪಿಎಲ್ಎಫ್ಐ)ಕ್ಕೆ ಸೇರಿದ ನಾಲ್ವರು ನಕ್ಸಲೀಯರನ್ನು ಬಾನೊ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಶಾಮ್ಸ್ ತಬ್ರೇಜ್, ''ನಕ್ಸಲರು ಕನರೊವಾನ್ ಅರಣ್ಯ ಪ್ರದೇಶದಲ್ಲಿ ಅಡಗಿ ಕೂತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಸಲಾಗಿದ್ದು ಈ ನಾಲ್ವರು ನಕ್ಸಲರನ್ನು ಬಂಧನ ಮಾಡಲಾಗಿದೆ. ನಕ್ಸಲರು ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಆದರೆ ಪೊಲೀಸರು ಬೆನ್ನಟ್ಟಿ ಹಿಡಿದು ನಕ್ಸಲರನ್ನು ಬಂಧಿಸಿದ್ದಾರೆ'' ಎಂದು ತಿಳಿಸಿದ್ದಾರೆ.
ಇನ್ನು ''ಬಂಧಿತರಿಂದ ದೇಶೀಯ ಬಂದೂಕು ಮತ್ತು ಎಂಟು ಕಾಟ್ರಿಡ್ಜ್ಗಳನ್ನು ವಶಕ್ಕೆ ಪಡೆಯಲಾಗಿದೆ'' ಎಂದು ತಿಳಿಸಿದ್ದಾರೆ.