ಜೈಪುರ್, ನ.02 (DaijiworldNews/PY): "ಸಿಡಿಮದ್ದು ಸಿಡಿಸುವುದರಿಂದ ಹೊರಬರುವ ವಿಷಕಾರಿ ಹೊಗೆಯಿಂದ ಕೊರೊನಾ ಸೋಂಕಿತ ರೋಗಿಗಳು ಹಾಗೂ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ರಾಜ್ಯದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ." ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸಿಡಿಮದ್ದು ಸಿಡಿಸುವ ಮೂಲಕ ಅದರ ವಿಷಾಕಾರಿ ಹೊಗೆಯಿಂದಾಗಿ ಕೊರೊನಾ ಸೋಂಕಿತ ರೋಗಿಗಳು ಹಾಗೂ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ರಾಜ್ಯದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿ ಪಟಾಕಿ ಮಾರಾಟ ಮಾಡಿದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ದೀಪಾವಳಿ ಸಂದರ್ಭ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರವೇ ಉಪಯೋಗ ಮಾಡುವಂತೆ ದೆಹಲಿ ಸರ್ಕಾರ ಕೂಡಾ ಆದೇಶಿಸಿದ್ದು, ಸಿಡಿಮದ್ದು ಮಾರಾಟ ಕಂಡುಬಂದಲ್ಲಿ ದುಬಾರಿ ದಂಡ ವಿಧಿಸಲಾಗುತ್ತದೆ" ಎಂದು ಹೇಳಿದೆ.