ನವದೆಹಲಿ, ನ.02 (DaijiworldNews/HR): ಎಚ್ ಡಿಎಫ್ ಸಿ ಬ್ಯಾಂಕ್ ಮಾಜಿ ಮುಖ್ಯಾಧಿಕಾರಿ ಆದಿತ್ಯ ಪುರಿ ಅವರನ್ನು ಕಂಪೆನಿಯ ಏಷ್ಯಾ ಹಿರಿಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಎಂದು ಜಾಗತಿಕ ಹೂಡಿಕೆ ಸಂಸ್ಥೆ ಕಾರ್ಲೈಲ್ ಘೋಷಣೆ ಮಾಡಿದೆ.
1994 ರಲ್ಲಿ ಆದಿತ್ಯ ಪುರಿ ಅವರು ಎಚ್ ಡಿಎಫ್ ಸಿ ಬ್ಯಾಂಕ್ ನ ಮೊದಲ ಸಿಇಒ ಆಗಿ ನೇಮಕ ಆಗಿದ್ದರು. ಅವರ 26 ವರ್ಷದ ಅಧಿಕಾರಾವಧಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಮತ್ತು ಮಾರುಕಟ್ಟೆ ಮೌಲ್ಯದ ವಿಚಾರದಲ್ಲಿ ಭಾರತದ ಅತ್ಯಂತ ಮೌಲ್ಯಯುತ ಬ್ಯಾಂಕ್ ಎನಿಸಿಕೊಂಡಿತು.
ಇನ್ನು ಕಾರ್ಲೈಲ್ ನಿಂದ ಏಷ್ಯಾದ್ಯಂತ 4.9 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಾಗಿದೆ. ಎಸ್ ಬಿಐ ಕಾರ್ಡ್, ಎಸ್ ಬಿಐ ಲೈಫ್, ಎಚ್ ಡಿಎಫ್ ಸಿ ಲಿ., ಪಿಎನ್ ಬಿ ಹೌಸಿಂಗ್ ಫೈನಾನ್ಸ್, ರೆಪ್ಕೊ ಹೌಸಿಂಗ್ ಫೈನಾನ್ಸ್, ಐಐಎಫ್ ಎಲ್ ಸೇರಿದಂತೆ ಅನೇಕ ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ.
ಜಾಗತಿಕ ಹೂಡಿಕೆ ಸಂಸ್ಥೆ ಕಾರ್ಲೈಲ್ ನ ಇಲ್ಲಿಯವರೆಗಿನ ದಾಖಲೆಗಳಿಂದ ನನಗೆ ಬಹಳ ಸಂತೋಷ ಇದೆ. ಭಾರತ ಮಾತ್ರವಲ್ಲ, ಏಷ್ಯಾದಾದ್ಯಂತ ಮುಂಚೂಣಿ ಸ್ಥಾನದಲ್ಲಿದೆ ಎಂದು ಆದಿತ್ಯ ಪುರಿ ಹೇಳಿದ್ದಾರೆ.