ನವದೆಹಲಿ,ನ.02 (DaijiworldNews/HR): ಜನತೆಗಾಗಿ ಇನ್ನೊಂದು ಪ್ಯಾಕೇಜ್ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿರುವುದಾಗಿ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಸುಳಿವು ನೀಡಿದ್ದಾರೆ.
ಈ ಕುರಿತು ಸಂಧರ್ಶನವೊಂದರಲ್ಲಿ ಮಾತನಾಡಿದ ಅಜಯ್ ಭೂಷಣ್ ಪಾಂಡೆ, "ಇದೀಗ ಕೈಗಾರಿಕಾ ಮಂಡಳಿಗಳು, ವ್ಯಾಪಾರ ಸಂಘಟನೆಗಳು, ಅನೇಕ ಸಚಿವಾಲಯಗಳಿಂದ ಸಲಹೆಗಳನ್ನು ಪಡೆಯುತ್ತಿದ್ದು, ಅವರ ಸಲಹೆಗಳನ್ನು ಪರಿಶೀಲಿಸಿದ ನಂತರ ಆರ್ಥಿಕತೆಯ ಆದ್ಯತೆ ನೋಡಿಕೊಂಡು ಸಮಯೋಚಿತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು".
ಇನ್ನು ಈ ಯಾವಾಗ ಪ್ಯಾಕೇಜ್ ಘೋಷಣೆಯಾಗುತ್ತದೆ ಎಂಬುದನ್ನು ಈ ಕೂಡಲೇ ಹೇಳಲು ಅಸಾಧ್ಯ. ಆದರೆ ಇದಕ್ಕಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಚರ್ಚಿಸುತ್ತಿದೆ ಎಂದು ತಿಳಿಸಿದ್ದಾರೆ.