ಬೆಂಗಳೂರು, ನ. 01 (DaijiworldNews/MB) : ''ಲೋಕಸಭೆಯಲ್ಲಿ ಮೂರಂಕಿ ದಾಟಲಾಗದ ಪಕ್ಷದಲ್ಲಿ ಮೂವತ್ತು ಸಿಎಂ ಆಕಾಂಕ್ಷಿಗಳು ಇದ್ದಾರೆ'' ಎಂದು ಕಾಂಗ್ರೆಸ್ಗೆ ಆರೋಗ್ಯ ಸಚಿವ ಕೆ ಸುಧಾಕರ್ ಟಾಂಗ್ ನೀಡಿದ್ದಾರೆ.
''ನಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ'' ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನೀಡಿರುವ ಹೇಳಿಕೆಗೆ ಸುಧಾಕರ್ ಅವರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ''ಮುಳುಗುತ್ತಿರುವ ಕಾಂಗ್ರೆಸ್ ಎಂಬ ಹಡಗಿಗೆ ನಾನೇ ನಾವಿಕ ಎಂದು ದುಂಬಾಲು ಬೀಳುತ್ತಿರುವ ನಾಯಕರನ್ನು ನೋಡಿ ಅಳಬೇಕೋ ಅಥವಾ ತಿರುಕನ ಕನಸು ಎಂದು ನಗಬೇಕೋ ಗೊತ್ತಾಗುತ್ತಿಲ್ಲ. ಲೋಕಸಭೆಯಲ್ಲಿ ಮೂರಂಕಿ ದಾಟಲಾಗದ ಪಕ್ಷದಲ್ಲಿ ಮೂವತ್ತು ಸಿಎಂ ಆಕಾಂಕ್ಷಿಗಳು. ಉಪಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಪಾಠವಾಗಲಿದೆ'' ಎಂದುಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.