ಹೊಸದಿಲ್ಲಿ, ಅ. 31 (DaijiworldNews/HR): ಬಿಜೆಪಿ ಅಭ್ಯರ್ಥಿ ಹಾಗೂ ಮಧ್ಯಪ್ರದೇಶದ ಸಚಿವೆ ಇಮಾರ್ತಿ ದೇವಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾರಣ ನವೆಂಬರ್ 1 ರಂದು ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ತಿಳಿಸಿದೆ.
ಮಧ್ಯಪ್ರದೇಶದ 28 ವಿಧಾನ ಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯವು ಇಂದು ಸಂಜೆಗೆ ಕೊನೆಯಾಗಲಿದೆ.
ಇಮಾರ್ತಿ ದೇವಿ ವಿರೋಧ ಪಕ್ಷದ ಸ್ಪರ್ಧಿಯನ್ನು ಹುಚ್ಚ ಎಂದು ಕರೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗವು ಮಂಗಳವಾರ ಇಮಾರ್ತಿ ದೇವಿಗೆ ಒಂದು ದಿನ ಪ್ರಚಾರ ಮಾಡದಂತೆ ನೋಟಿಸ್ ನೀಡಿತ್ತು.