ಕೊಪ್ಪಳ, ಅ. 31 (DaijiworldNews/HR): ಉತ್ತರ ಕರ್ನಾಟಕ ಭಾಗಕ್ಕೆ ನೆರೆ ಪರಿಹಾರ ಹಂಚಿಕೆಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ರಾಜ್ಯ ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದು, ಅವರು ಹೇಳುವ ಮಾತುಗಳೆಲ್ಲ ವೇದವಾಕ್ಯವಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಪಾಟೀಲ್, ಯತ್ನಾಳ ಅವರು ಸರ್ಕಾರವನ್ನು ಆರೋಪಿದಾಕ್ಷಣ ಎಲ್ಲವೂ ವೇದವಾಕ್ಯವಲ್ಲ. ನೆರೆ ಪರಿಹಾರ ವಿತರಣೆಯ ಪಟ್ಟಿಯನ್ನ ಒಮ್ಮೆ ಪರೀಕ್ಷಿಸಿ ಎಲ್ಲಿ ಎಷ್ಟು ನೆರೆ ಹಾನಿಯಾಗಿದೆ, ಅಧಿಕಾರಿಗಳು ಎಷ್ಟು ವರದಿ ಕೊಟ್ಟಿದ್ದಾರೆ ಎಂಬುದನ್ನು ಗಮನಿಸಬೇಕು ಹೊರತು ಬಾಯಿಗೆ ಬಂದಂತೆ ಸುಮ್ಮನೆ ಹೇಳೋದು ಸರಿಯಲ್ಲ ಎಂದರು.
ಇನ್ನು ಸಿದ್ದರಾಮಯ್ಯ ವಿರುದ್ಧ ಗಡುಗಿದ ಪಾಟೀಲ್, 17 ಶಾಸಕರ ಭವಿಷ್ಯ ಹಾಳಾಗಿ ಹೋಗುತ್ತೆ ಎಂದಿದ್ದರು, ಆದರೆ ಮೊದಲಿಗೆ ತಮ್ಮ ಸ್ಥಾನವನ್ನ ಭದ್ರ ಮಾಡಿಕೊಳ್ಳಲಿ. ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.
ರಾಜರಾಜೇಶ್ವರಿ ನಗರ, ಶಿರಾ ಸೇರಿ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎನ್ನು ಭರವಸೆ ಇದೆ. ಅದರಂತೆಯೇ ನಮಗೆ ಅದ್ಭುತ ಸ್ಪಂದನೆ ಸಿಕ್ಕಿದೆ ಎಂದರು.