ಹೊಸದಿಲ್ಲಿ, ನ.01 (DaijiworldNews/HR): ನಮ್ಮ ದೇಶದಲ್ಲಿ ತತ್ವ ಹಾಗೂ ಆಚರಣೆ ಎನಿಸಿರುವ ಜಾತ್ಯತೀತತೆ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ದೇಶವನ್ನು ಆಡಳಿತ ಮಾಡುತ್ತಿರುವ ಸರ್ಕಾರ 'ಜಾತ್ಯತೀತ' ಪದವನ್ನು ಸಂವಿಧಾನದಿಂದ ಕಿತ್ತುಹಾಕಲೂ ಪ್ರಯತ್ನಿಸುತ್ತಿದೆ. ಆದರೆ ಅಂತಹ ಶಕ್ತಿಗಳಿಂದ ದೇಶದ ಜಾತ್ಯತೀತ ಕ್ರಮಗಳನ್ನು ಯಾವುದೇ ಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂದರು.
ಇನ್ನು ಜಾತ್ಯತೀತತೆ ಎನ್ನುವಂತಹದು ಕೇವಲ ಒಂದು ಶಬ್ದ, ಹಾಗಾಗಿ ಅದನ್ನು ಆಡಳಿತ ವರ್ಗ ಸಂವಿಧಾನದಿಂದ ಹೊರತೆಗೆದರು ಕೂಡ ನಮ್ಮ ಸಂವಿಧಾನ ಮಾತ್ರ ತನ್ನ ಮೂಲ ಸಂರಚನೆಯ ಕಾರಣದಿಂದಾಗಿ ಜಾತ್ಯತೀತ ಸಂವಿಧಾನವಾಗಿಯೇ ಮುಂದುವರಿಯಲಿದೆ ಎಂಬುದಾಗಿ ಪ್ರತಿಪಾದಿಸಿದರು.