ನವದೆಹಲಿ, ನ.01 (DaijiworldNews/PY): "ವಾಸ್ತವ ನಿಯಂತ್ರಣ ರೇಖೆಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ಭಾರತ ಒಪ್ಪುವುದಿಲ್ಲ. ಭಾರತ ಹಾಗೂ ಚೀನಾ ಸಂಬಂಧದ ಮೇಲೆ ತೀವ್ರವಾದ ಒತ್ತಡವಿದೆ" ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಆಲ್ ಇಂಡಿಯಾ ರೇಡಿಯೊದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಸ್ಮರಣಾ ಉಪನ್ಯಾಸ ನೀಡಿದ ಅವರು, "ಮೂರು ದಶಕಗಳಿಂದ ಚೀನಾದೊಂದಿಗಿನ ಸಂಬಂಧಗಳ ಸ್ಥಿರವಾಗಿತ್ತು. ಅಲ್ಲದೇ, ಹೊಸ ಸವಾಲುಗಳು ಹಾಗೂ ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿಭಾಯಿಸಿವೆ. ಆದರೆ, ವಾಸ್ತವ ನಿಯಂತ್ರಣ ರೇಖೆಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ಭಾರತ ಒಪ್ಪುವುದಿಲ್ಲ" ಎಂದು ತಿಳಿಸಿದ್ದಾರೆ.
"ಭಾರತವು, ಗಡಿಯಾಚೆಗಿನ ಭಯೋತ್ಪಾನೆ ವಿರುದ್ದ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ" ಎಂದಿದ್ದಾರೆ.
ಚೀನಾ ವಿಚಾರವಾಗಿ ಹೇಳುವುದಾದರೆ, "ಕೊರೊನಾ ಸಾಂಕ್ರಾಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾದ ಸಂಬಂಧದ ಮೇಳೆ ತೀವ್ರವಾದ ಒತ್ತಡವಿದೆ. ಈ ಸಂಬಂಧವನ್ನು ಮರಳಿ ತರಬೇಕಾದರೆ ಉಭಯ ದೇಶಗಳ ನಡುವೆ ಪೂರ್ಣವಾಗಿ ಗೌರವವಿರಬೇಕು. ವಾಸ್ತವ ನಿಯಂತ್ರಣ ರೇಖೆಯ ವಿಚಾರವಾಗಿ ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ಭಾರತ ಒಪ್ಪಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.