ಬೆಂಗಳೂರು,ಅ. 31 (DaijiworldNews/HR): ಪಟೇಲ್ ಪ್ರತಿಮೆಗೆ ಕಾಂಗ್ರೆಸ್ ನವರ ವಿರೋಧವಿಲ್ಲ, ಆದರೆ ಜವಾಹರ್ ಲಾಲ್ ನೆಹರು ಹಾಗೂ ಸರ್ದಾರ್ ಪಟೇಲ್ ಸಂಬಂಧದ ಬಗ್ಗೆ ಬಿಜೆಪಿ ನಾಯಕರು ಇತಿಹಾಸವನ್ನೇ ತಿರುಚುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ದಿ. ಇಂದಿರಾಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಗಾಂಧಿ ಕುಟುಂಬದ ಕೊಡುಗೆ ಅಪಾರವಾಗಿದೆ. ಆದರೆ ಗಾಂಧಿಯವರನ್ನು ಕೊಂದ ಕುಟುಂಬದವರು ಬಿಜೆಪಿ ನಾಯಕರು, ನಿಜವಾದ ಇತಿಹಾಸ ಹೇಳುವುದಿಲ್ಲ. ಸುಳ್ಳು ಹೇಳುವುದೇ ಬಿಜೆಪಿ ನಾಯಕರ ಕೆಲಸ ಎಂದು ಹೇಳಿದ್ದಾರೆ.
ಇನ್ನು ದೇಶಕ್ಕಾಗಿ ಬಿಜೆಪಿಯ ಒಬ್ಬ ನಾಯಕರು ಕೂಡ ಪ್ರಾಣತ್ಯಾಗ ಮಾಡಿಲ್ಲ. ಆದರೂ ನಾವು ದೇಶಭಕ್ತರು ಎಂದು ಬಿಜೆಪಿಯವರು ಹೇಳುತ್ತಾರೆ. ಇವರು ಗಾಂಧೀಜಿ ಕೊಂದ ಗೂಡ್ಸೆ ವಂಶಸ್ಥರು ಎಂದು ಆರೋಪಿಸಿದ್ದಾರೆ.