ಭೋಪಾಲ,ಅ. 31 (DaijiworldNews/HR): ಸ್ಟಾರ್ ಪ್ರಚಾರಕ ಎನ್ನುವುದು ಯಾವುದೇ ಹುದ್ದೆ ಅಥವಾ ಸ್ಥಾನಮಾನವಲ್ಲ ಎಂಬುದಾಗಿ ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರದ ವೇಳೆ ಮಾದರಿ ಸಂಹಿತೆಯನ್ನು ಪದೇ ಪದೆ ಉಲ್ಲಂಘಿಸಿದ್ದಕ್ಕಾಗಿ ಕಮಲನಾಥ್ ಅವರ ಸ್ಟಾರ್ ಪ್ರಚಾರಕ ಸ್ಥಾನಮಾನವನ್ನು ಚುನಾವಣಾ ಆಯೋಗ ರದ್ದುಪಡಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಕಮಲನಾಥ್ , "ಸ್ಟಾರ್ ಪ್ರಚಾರಕ ಎಂಬುದು ಹುದ್ದೆ ಅಥವಾ ಸ್ಥಾನಮಾನವಲ್ಲ. ಚುನಾವಣೆ ಆಯೋಗದ ನಿರ್ಧಾರದ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ, ಚುನಾವಣೆ ಫಲಿತಾಂಶ ನಂತರ ನಾನು ಮಾತಾಡುತ್ತೇನೆ. ಕೊನೆಗೆ ಇಲ್ಲಿ ಜನರೇ ಅಂತಿಮ" ಎಂದು ಹೇಳಿದ್ದಾರೆ.
ಇನ್ನು ಒಂದು ವೇಳೆ ಇಂದಿನಿಂದ ಕಮಲ್ನಾಥ್ ಅವರು ಯಾವುದೇ ಪ್ರಚಾರ ಕೈಗೊಂಡರೆ, ಪ್ರಯಾಣ, ವಾಸ್ತವ್ಯ ಮತ್ತು ಭೇಟಿಗೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ಕ್ಷೇತ್ರದ ಅಭ್ಯರ್ಥಿಯೇ ಭರಿಸಬೇಕು ಎಂಬುದಾಗಿ ಚುನಾವಣಾ ಆಯೋಗ ಹೇಳಿತ್ತು.