ಕೆವಾಡಿಯಾ, ಅ.31 (DaijiworldNews/PY): ಗುಜರಾತ್ನ ಸಾಬರಮತಿ ನದಿ ತೀರದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಹಾರಾಟ ನಡೆಸುವ ದೇಶದ ಮೊದಲ ಸೀಪ್ಲೇನ್ ಸೇವೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು.
ಸರ್ದಾರ್ ಸರೋವರ್ ಡ್ಯಾಮ್ ಸಮೀಪದಿಂದ ಪಾಂಡ್-3ರಿಂದ ಡಬಲ್ ಇಂಜಿನ್ಗಳ ಸೀಪ್ಲೇನ್ ಅನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.
ಪ್ರಧಾನಿ ಮೋದಿ ಅವರು ವಿಮಾನ ಏರುವ ಮುನ್ನ ಸೀಪ್ಲೇನ್ ಸೇವೆಯ ಬಗ್ಗೆ ವಿವರ ಪಡೆದುಕೊಂಡರು.
19 ಆಸನಗಳನ್ನು ಹೊಂದಿರುವ ಈ ಸೀಪ್ಲೇನ್ನಲ್ಲಿ ಪ್ರಧಾನಿ ಮೋದಿ ಅವರು 40 ನಿಮಿಷಗಳಲ್ಲಿ ಸುಮಾರು 200 ಕಿ.ಮೀ ದೂರ ಕ್ರಮಿಸಿದ್ದು, ಏಕತಾ ಪ್ರತಿಮೆಯ ಸ್ಥಳಕ್ಕೆ ಬಂದಿಳಿದರು.