ಬೆಂಗಳೂರು, ಅ. 31 (DaijiworldNews/MB) : ಸಾರ್ವಜನಿಕ ವ್ಯವಹಾರಗಳ ಕೇಂದ್ರ ಬಿಡುಗಡೆಗೊಳಿಸಿರುವ ದೇಶದ ಉತ್ತಮ ಆಡಳಿತ ನಿರ್ವಹಣೆಯ ರಾಜ್ಯದ ಪಟ್ಟಿಯಲ್ಲಿ ಕೇರಳ ಹಾಗೂ ಗೋವಾ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ. ದೊಡ್ಡ ರಾಜ್ಯಗಳ ಪೈಕಿ ಕೇರಳ ಮೊದಲ ಅಗ್ರ ಸ್ಥಾನದಲ್ಲಿದ್ದು ಸಣ್ಣ ರಾಜ್ಯಗಳ ಪೈಕಿ ಗೋವಾ ಅಗ್ರ ಸ್ಥಾನದಲ್ಲಿದೆ.
ದೇಶದಲ್ಲಿರುವ ರಾಜ್ಯಗಳನ್ನು ದೊಡ್ಡ ರಾಜ್ಯಗಳು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಂದು ಮೂರು ವಿಭಾಗದಲ್ಲಿ ವಿಂಗಡಿಸಿ ಉತ್ತಮ ಆಡಳಿತದ ರಾಜ್ಯದ ಪಟ್ಟಿಯನ್ನು ಮಾಡಲಾಗಿದೆ.
ಇನ್ನು ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿ ಕೇರಳ, ಬಳಿಕ ತಮಿಳುನಾಡು, ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ. ಉತ್ತರ ಪ್ರದೇಶ, ಬಿಹಾರ, ಒಡಿಶಾ ಪಟ್ಟಿಯ ಅಂತ್ಯದಲ್ಲಿದ್ದು ಹಿಂದುಳಿದ ರಾಜ್ಯಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇನ್ನು ಈ ಮೊದಲು ನಾಲ್ಕು ಸ್ಥಾನಗಳನ್ನು ದಕ್ಷಿಣ ಭಾರತದ ರಾಜ್ಯಗಳೇ ಪಡೆದುಕೊಂಡಿದೆ. ಅತೀ ಕಡಿಮೆ ಅಂಕ ಗಳಿಸುವ ಮೂಲಕ ಕೊನೆಯ ಉತ್ತರ ಪ್ರದೇಶ, ಒಡಿಶಾ ಮತ್ತು ಬಿಹಾರ ಕೊನೆಯ ಸ್ಥಾನದಲ್ಲಿದೆ.
ಸಣ್ಣ ರಾಜ್ಯಗಳ ಪೈಕಿ ಗೋವಾ ಮೊದಲ ಸ್ಥಾನದಲ್ಲಿದ್ದು ದ್ವಿತೀಯ ಸ್ಥಾನದಲ್ಲಿ ಮೇಘಾಲಯ, ಬಳಿಕ ಹಿಮಾಚಲಪ್ರದೇಶವಿದ್ದು ಮಣಿಪುರ, ಮಣಿಪುರ, ಉತ್ತರಾಖಂಡ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.