ಬೆಳಗಾವಿ, ಅ. 31 (DaijiworldNews/MB) : ನಾಳೆ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವಾಗಿದ್ದು ಈ ದಿನವನ್ನು ಮಹಾರಾಷ್ಟ್ರ ಸರ್ಕಾರ 'ಕಪ್ಪು ದಿನ'ವಾಗಿ ಆಚರಿಸಲು ತೀರ್ಮಾನಿಸಿದೆ.
ಕಳೆದ ಗುರುವಾರ ಮುಂಬೈಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನವೆಂಬರ್ ಒಂದರಂದು ಕೈಗಳಿಗೆ ಕಪ್ಪು ರಿಬ್ಬನ್ನ್ನು ಕಟ್ಟಿ ಆ ದಿನವನ್ನು ಕಪ್ಪು ದಿನವಾಗಿ ಆಚರಿಸುವಂತೆ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕರೆ ನೀಡಿದೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಗಳ ಸಚಿವ ಏಕನಾಥ್ ಶಿಂಧೆ, ನವೆಂಬರ್ 1 ರಂದು ಕೈಗೆ ಕಪ್ಪು ಪಟ್ಟಿ ಕಟ್ಟುವ ಮೂಲಕ ಬೆಳಗಾವಿಯಲ್ಲಿ ಮರಾಠಿಗರ ಹೋರಾಟವನ್ನು ಬೆಂಬಲಿಸಬೇಕೆಂದು ಸೂಚಿಸಿದ್ದಾರೆ.