ಅಹ್ಮದಾಬಾದ್,ಅ.30 (DaijiworldNews/HR): 25 ಕೋಟಿ ರೂ. ಗೆ ಕಾಂಗ್ರೆಸ್ ಪಕ್ಷದ ಇಡೀ ರಾಜ್ಯ ಘಟಕವನ್ನು ಖರೀದಿಸಬಹುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
ಈ ಕುರಿತು ಅಹ್ಮದಾಬಾದ್ ನ ಸುರೇಂದ್ರ ನಗರ್ ಸಮೀಪದ ಲಿಂಬ್ಡಿ ಎಂಬಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಈಗಿನ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಅವರ ಮೌಲ್ಯಗಳಿಂದ ದೂರವಾಗಿದ್ದು, ಈಗಿನ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಅವರ ಕಾಲದಲ್ಲಿದ್ದ ಕಾಂಗ್ರೆಸ್ ಪಕ್ಷದಂತಿಲ್ಲ. ಈಗ ಕೇವಲ ರಾಹುಲ್ ಗಾಂಧಿಯ ಪಕ್ಷವಾಗಿದೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದ ಮಾಜಿ ಕರ್ಜಾನ್ ಶಾಸಕರನ್ನು 'ಬಿಜೆಪಿ ರೂ. 25 ಕೋಟಿ ಹಾಗೂ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿ ಖರೀದಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ರೂಪಾನಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ತನ್ನ ಶಾಸಕರುಗಳಿಗೇ ಗೌರವ ನೀಡುತ್ತಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.