ಕೆವಾಡಿಯಾ, ಅ.30 (DaijiworldNews/PY): ಗುಜರಾತ್ನ ಕೆವಾಡಿಯಾದಲ್ಲಿನ ವಿಶ್ವ ಪ್ರಸಿದ್ದ ತಾಣವಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾಪ್ರತಿಮೆಯ ಬಳಿ ನಿರ್ಮಿಸಿದಂತ ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಉದ್ಯಾನ ಆರೋಗ್ಯ ವನವನ್ನು ಶುಕ್ರವಾರ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.
ಆರೋಗ್ಯ ವನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಉದ್ಯಾನಕ್ಕೇ ಭೇಟಿ ನೀಡಿ, ಬಳಿಕ ಗೈಡ್ಗಳೊಂದಿಗೆ ಮಾತನಾಡಿದರು.
ಈ ಆರೋಗ್ಯವನ್ನು ಸುಮಾರು 17 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಈ ವನದಲ್ಲಿ ವೈವಿಧ್ಯಮಯ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ.
ಈ ಉದ್ಯಾನದಲ್ಲಿ ಸುಮಾರು 380 ಆಯ್ದ ಜಾತಿಗಳ ಐದು ಲಕ್ಷ ಔಷಧೀಯ ಸಸ್ಯಗಳನ್ನು ಬೆಳಸಲಾಗಿದೆ. ಇನ್ನು ಈ ಉದ್ಯಾನವು ಸಸ್ಯಗಳ ಉದ್ಯಾನ ಸೇರಿದಂತೆ ತಾವರೆ ಕೊಳ, ಆಲ್ಬಾ ಗಾರ್ಡನ್ ಯೋಗ ಹಾಗೂ ಧ್ಯಾನ ಕೇಂದ್ರ, ಡಿಜಿಟಲ್ ಮಾಹಿತಿ ಕೇಂದ್ರ ಹಾಗೂ ಕೆಫೇಟೇರಿಯಾವನ್ನು ಒಳಗೊಂಡಿದೆ.