ಮುಂಬೈ, ಅ.30 (DaijiworldNews/PY): "ಬಿಹಾರ್ದ ಮಂಗರ್ನಲ್ಲಿ ನಡೆದಿರುವ ಗುಂಡಿನ ದಾಳಿಯು ಹಿಂದುತ್ವದ ದಾಳಿಯಾಗಿದ್ದು, ಈ ವಿಚಾರವಾಗಿ ಏಕೆ ಬಿಹಾರದ ರಾಜ್ಯಪಾಲ ಪ್ರಶ್ನೆ ಮಾಡಿಲ್ಲ?" ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಂಗರ್ನಲ್ಲಿ ನಡೆದ ಗುಂಡಿನ ದಾಳಿ ಹಿಂದುತ್ವ ದಾಳಿಯಾಗಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಅಥವಾ ರಾಜಸ್ಥಾನದಲ್ಲಿ ಇಂಥಹ ಘಟನೆ ಸಂಭವಿಸಿದ್ದರೆ, ರಾಜ್ಯಪಾಲು ಹಾಗೂ ಬಿಜೆಪಿ ನಾಯಕರು ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸುತ್ತಿದ್ದರು. ಆದರೆ, ಬಿಹಾರ ರಾಜ್ಯಪಾಲರು ಹಾಗೂ ಬಿಜೆಪಿ ನಾಯಕರು ಏಕೆ ಈ ಬಗ್ಗೆ ಪ್ರಶ್ನೆ ಎತ್ತಿಲ್ಲ?" ಎಂದು ಕೇಳಿದ್ದಾರೆ.
"ಬಿಹಾರ, ಉತ್ತರಪ್ರದೇಶ ಹಾಗೂ ಹರಿಯಾಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೀಡಿ. ಈ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಎಂತಹ ಕಾನೂನು ವ್ಯವಸ್ಥೆ ಇದೆ?. ಆದರೆ, ಈ ರಾಜ್ಯಗಳಲ್ಲಿ ಎಲ್ಲವೂ ಸರಿಯಾಗಿದೆ. ಮಹಾರಾಷ್ಟ್ರ ಪಂಜಾಬ್, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನಗಳಲ್ಲಿ ಮಾತ್ರ ಸಮಸ್ಯೆಗಳಿವೆ ಎಂದು ಬಿಜೆಪಿ ಭಾವಿಸಿದೆ" ಎಂದಿದ್ದಾರೆ.
"ಬಿಹಾರದ ಮಂಗರ್ನಲ್ಲಿ ದುರ್ಗಾ ದೇವಿ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಸಂದರ್ಭ ಹಿಂಸಾಚಾರ ಉಂಟಾಗಿದ್ದು, ಇದಾದ ನಂತರ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು ಅನೇಕ ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯು ಹಿಂದುತ್ವದ ದಾಳಿ" ಎಂದು ಹೇಳಿದ್ದಾರೆ.
ಮತದಾನ ನಡೆಯುತ್ತಿರುವ ವೇಳೆ ನಡೆದ ಗಲಭೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗುರ್ ಜಿಲ್ಲಾಧಿಕಾರಿಯನ್ನು ಶೀಘ್ರವೇ ವಜಾ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
"ಮಗಧ್ನ ವಿಭಾಗೀಯ ಆಯುಕ್ತ ಅಸಂಗ್ಬಾ ಚುಬಾ ಎಒ ಅವರು ಘಟನೆಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸುವಂತೆ" ತಿಳಿಸಿದ್ದಾರೆ.