ಅಹಮದಾಬಾದ್,ಅ.30 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ತನ್ನ ತವರು ರಾಜ್ಯ ಗುಜರಾತ್ ಪ್ರವಾಸಕ್ಕಾಗಿ ಇಂದು ಬೆಳಿಗ್ಗೆ ಅಹಮದಾಬ್ ಆಗಮಿಸಿದ್ದಾರೆ.
ಅಹಮದಾಬ್ ನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಸ್ವಾಗತಿಸಿದ್ದಾರೆ.
ಗುರುವಾರ ನಿಧನರಾದ ಗುಜರಾತ್ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಕೇಶುಭಾಯ್ ಪಟೇಲ್ ಅವರ ಕುಟುಂಬವನ್ನು ಭೇಟಿಯಾಗಲು ವಿಮಾನ ನಿಲ್ದಾಣದಿಂದ ಗಾಂಧಿನಗರಕ್ಕೆ ತೆರಳಿದ್ದಾರೆ.
ಇನ್ನು ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ಕೆವಡಿಯಾ ಮತ್ತು ಅಹಮದಾಬಾದ್ ನಡುವೆ ಸೀಪ್ಲೇನ್ ಸೇವೆ ಉದ್ಘಾಟಿಸಲಿದ್ದು, ಇದೇ ವೇಳೆ 'ಸ್ಟ್ಯಾಚ್ಯು ಆಫ್ ಯುನಿಟಿ'- ವಲಭಭಾಯಿ ಪಟೇಲ್ ಅವರ ಪುತ್ಥಳಿಯ ಸ್ಥಳಕ್ಕೆ ಭೇಟಿ ಕೆಲವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.